ಸರ್ವಶಕ್ತನಾದ ದೇವರ ಯೋಜನೆಯಲ್ಲಿ , ಕರ್ತನಾದ ಯೇಸುವಿನ ತ್ಯಾಗ ಬಲಿಯು ಅನೇಕ ವಿಚಾರಗಳು, ಆಶೀರ್ವಾದಗಳು, ಮತ್ತು ಮಹಿಮೆಯನ್ನು ಪ್ರಾರಂಭಿಸುವ ಮಹಾನ್ ತ್ಯಾಗಬಲಿಯಾಗಿದೆ. ಯೇಸುವಿನ ಮನುಷ್ಯ ಜೀವನ ಹಕ್ಕುಗಳು ಎಂಬ ಈ ಪುಸ್ತಕದ ಮೂಲಕ ಕರ್ತನಾದ ಯೇಸು ಅರ್ಪಿಸಿದ ಬಲಿಯಲ್ಲಿರುವ ಪುಣ್ಯ , ದೇವರು ಮತ್ತು ಯೇಸುವಿನ ನಡುವೆ ಇರುವ ಪ್ರೀತಿಯ ಸಂಬಂಧ, ಧರ್ಮಶಾಸ್ತ್ರದ ನೆರವೇರಿಕೆ, ಜೀವಿ ಸುವ ಹಕ್ಕನ್ನು ಪಡೆದು ಅದನ್ನು ದೇವರಿಗೆ ಒಪ್ಪಿಸಿದ ಯೇಸುವಿನ ವಿಧೇಯತೆ, ಈಡು ಬಲಿಯ ಪುಣ್ಯದ ಮೂಲಕ ಸಭೆ ಸಾಧಿಸುವ ಗುರಿ, ಕರ್ತನು ಮತ್ತು ಸಭೆಯು ಒಟ್ಟಾಗಿ ಸೇರಿ ಲೋಕದ ಜನರಿಗೆ ನೀಡುವ ಆಶೀರ್ವಾದಗಳು ಮತ್ತು ಇನ್ನೂ ಅನೇಕ ಆಳವಾದ ಅರ್ಥಗಳನ್ನು ಈ ಪುಸ್ತಕದಲ್ಲಿ ದೇವರ ಕೃಪೆಯಿಂದ ತೋರಿಸಲಾಗಿದೆ. ಈ ಪುಸ್ತಕವನ್ನು ಸಹೋದರ ರಸ್ಸೆಲ್ ಅವರ ಬರಹಗಳಿಂದ ಆರಿಸಲಾಗಿದೆ